Posted by : N manjunath February 22, 2014

ಸಮಾರಂಭಕ್ಕೆ ನೀವೂ ಬನ್ನಿ...
ನಿಮ್ಮ `ಕ್ರಾಂತಿದೀಪ' ೨೯ ವರ್ಷ ಪೂರೈಸಿ, ೩೦ರ ಹೊಸ್ತಿಲಲ್ಲಿದೆ. ಓದುಗ ಪ್ರಭುಗಳಾದ ನಿಮ್ಮ ಅಭಿಮಾನ, ಆಶಯದಿಂದ ರೂಪಿ ಸಿದ `ಕ್ರಾಂತಿದೀಪ' ಪತ್ರಿಕೆಗೆ  ೨೦೦೩ರಲ್ಲಿ `ಆಂದೋಲನ' ಪ್ರಶಸ್ತಿ, ೨೦೧೩ರಲ್ಲಿ ಪತ್ರಿಕೆಯ ಸಂಪಾದಕನಾದ ನನಗೆ `ಕಿಡಿಶೇಷಪ್ಪ' ಪ್ರಶಸ್ತಿ ಬಂದಿದ್ದನ್ನು  ನಿಮ್ಮೊಂದಿಗೆ ಹಂಚಿಕೊಂಡಿ ದ್ದೇನೆ. ಇದೀಗ ಕರ್ನಾಟಕ ಮಾಧ್ಯಮ ಅಕಾಡೆಮಿಕ ವಾರ್ಷಿಕ ಪ್ರಶಸ್ತಿ ಲಭಿಸಿದೆ.
ಜನಸಾಮಾನ್ಯರ ನೋವಿಗೆ ಸದಾ ಸ್ಪಂದಿಸುತ್ತಾ, ಎಂತ ಕಠಿಣ ಸಂದರ್ಭದಲ್ಲೂ  ಪತ್ರಿಕೆಯ ಬದ್ಧತೆಗೆ ಧಕ್ಕೆಯಾಗದಂತೆ ಭ್ರಷ್ಟರನ್ನು ಬಯಲಿ ಗೆಳೆಯುತ್ತಾ, ಸಜ್ಜನರಿಗೆ ಪ್ರಚಾರ ನೀಡುವಲ್ಲಿ  `ಕ್ರಾಂತಿದೀಪ' ಎಂದೂ ಹಿಂದೆ ಬಿದ್ದಿಲ್ಲ. ೨೯ ವರ್ಷಗಳ ಸುದೀರ್ಘ ನನ್ನ  ಅಕ್ಷರ  ಕೃಷಿಯಲ್ಲಿ  ರಾಜಿ ರಹಿತ ಹೋರಾಟ ನಡೆಸಿಕೊಂಡೇ ಬಂದಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಕಾರಣ ಎಂದರೆ ತಪ್ಪಾಗಲಾರದು.
ನಾಡಿನ ಖ್ಯಾತ ಪತ್ರಕರ್ತರು ಪ್ರಶಸ್ತಿ ಬಂದಾಗ ನನಗೆ ಹಾರೈಸಿ ಮಂಜುನಾಥ್ ನಿಮಗೆ ನಾಲ್ಕೈದು ವರ್ಷಗಳ ಹಿಂದೆ ಈ ಪ್ರಶಸ್ತಿ ಬರಬೇಕಾಗಿತ್ತು. ಹೋಗಲಿ ಈಗಲಾದರೂ ಬಂತಲ್ಲ ಅದೇ ನಮಗೆಲ್ಲಾ ಸಂತಸ ತಂದಿದೆ, ನಿನ್ನ ಸಮಾರಂಭದಲ್ಲಿ ನಾವೆಲ್ಲ ಹಾಜರಿರುತ್ತೇವೆ ಎಂದು ಆಶ್ವಾಸನೆ ನೀಡಿರುವುದು ನನಗೆ ಪ್ರಶಸ್ತಿ ಬಂದಿದ್ದಕ್ಕಿಂತ ಹೆಚ್ಚು ಖುಷಿ ನೀಡಿದೆ. 
ಫೆ.೨೪ ರಂದು ಸೋಮವಾರ ಸಂಜೆ ೫ ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಈ ಪ್ರಶಸ್ತಿ ಪ್ರದಾನದ ಸಂತಸದ ಸಂಭ್ರಮ ದಲ್ಲಿ  ನೀವು ಬಂದು ಭಾಗವಹಿಸಿ ಎಂದು ಆಹ್ವಾನಿಸುತ್ತೇನೆ. 
ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಅಧ್ಯಕ್ಷತೆಯನ್ನು ವಾರ್ತಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಆರ್.ರೋಷನ್‌ಬೇಗ್ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಶ್ರೀ ಜಗದೀಶ್‌ಶೆಟ್ಟರ್, ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು, ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಕಾರ್ಯದರ್ಶಿಗಳಾದ ಕೆ.ಆರ್. ನಿರಂಜನ್, ವಾರ್ತಾ ಇಲಾಖೆ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಭಾಗವಹಿಸಲಿದ್ದಾರೆ.
ಕರ್ನಾಟಕ ಮಾದ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ.ಎ. ಪೊನ್ನಪ್ಪ ಆಶಯ ನುಡಿ ಹೇಳಲಿದ್ದಾರೆ ಎಂದು ಕಾರ್ಯದರ್ಶಿ ಎಸ್.ಶಂಕರಪ್ಪ ತಿಳಿಸಿದ್ದಾರೆ.
ನಿಮಗಾಗಿ ಈ ಸಮಾರಂಭಕ್ಕಾಗಿ ಆಹ್ವಾನಿಸಲು ನಿರೀಕ್ಷೆಯಲ್ಲಿರುವ....

-ಎನ್.ಮಂಜುನಾಥ್

Leave a Reply

Subscribe to Posts | Subscribe to Comments